ಅಭಿಪ್ರಾಯ / ಸಲಹೆಗಳು

ಸೇವಾಸಿಂಧು

ಅನುಕಂಪದ ಆಧಾರದ ನೇಮಕಾತಿ


ಕರ್ನಾಟಕ ಸರ್ಕಾರ ಸಚಿವಾಲಯದಲ್ಲಿನ ಗ್ರೂಪ್-ಸಿ ಮತ್ತು ಗ್ರೂಪ್-ಡಿ ವೃಂದಗಳ ಹುದ್ದೆಗಳಿಗೆ ಅನುಕಂಪದ ಆಧಾರದ ನೇಮಕಾತಿಯನ್ನು “ಸೇವಾ ಸಿಂಧು” ಅಡಿ ಆನ್ ಲೈನ್ ನಲ್ಲಿ ಅಳವಡಿಸಿದ್ದು, ವೆಬ್ ಸೈಟ್ ವಿಳಾಸ https:// www.sevasindhu.karnataka.gov.in  ನಲ್ಲಿ ಅರ್ಜಿ ಸಲ್ಲಿಸಬೇಕಾಗಿರುತ್ತದೆ.

ಕರ್ನಾಟಕ ಸರ್ಕಾರ ಸಚಿವಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಾಗೂ ಕೆ.ಎ.ಎಸ್. ವೃಂದದವರನ್ನೊಳಗೊಂಡಂತೆ ಅಧಿಕಾರಿ/ನೌಕರರು ಸೇವೆಯಲ್ಲಿರುವಾಗಲೇ ಮೃತಪಟ್ಟಲ್ಲಿ, ಮೃತ ನೌಕರರ ಕುಟುಂಬದ ಅರ್ಹ ಸದಸ್ಯರಿಗೆ ಅವರ ವಿದ್ಯಾರ್ಹತೆಗೆ ತಕ್ಕಂತೆ ಕರ್ನಾಟಕ ನಾಗರಿಕ ಸಿವಿಲ್ ಸರ್ವೀಸ್ (ಅನುಕಂಪದ ಆಧಾರದ ನೇಮಕಾತಿ) ನಿಯಮಗಳು, 1996 ರನ್ವಯ ಸಚಿವಾಲಯದಲ್ಲಿನ ಗ್ರೂಪ್-ಸಿ ವೃಂದದ ಸಹಾಯಕ ಹಾಗೂ ಕಿರಿಯ ಸಹಾಯಕ ಹುದ್ದೆಗಳಿಗೆ ಮತ್ತು ಗ್ರೂಪ್-ಡಿ ವೃಂದಗಳಿಗೆ ಸೇವಾ ಸಿಂಧು ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದು, ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಈ ಕೆಳಕಂಡ ದಾಖಲೆಗಳನ್ನು ಅಪ್ ಲೋಡ್ ಮಾಡಬೇಕಾಗಿರುತ್ತದೆ.

ಗ್ರೂಪ್-ಸಿ ಹಾಗೂ ಗ್ರೂಪ್-ಡಿ ಹುದ್ದೆಗಳಿಗೆ ಅನುಕಂಪದ ಆಧಾರದ ಮೇಲೆ ಅರ್ಜಿ ಸಲ್ಲಿಸಲು ಅರ್ಹತೆ.
• ಅರ್ಹತೆ: ಎ) ಕನಿಷ್ಟ ವಯಸ್ಸು 18 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರಾಗಿರಬೇಕು
ಬಿ) ಸಾಮಾನ್ಯ ವರ್ಗ ಅರ್ಜಿದಾರರಿಗೆ:ಗರಿಷ್ಠ ವಯಸ್ಸಿನ ಮಿತಿ 35 ವರ್ಷಗಳು
ಸಿ) ಇತರೆ ಹಿಂದುಳಿದ ವರ್ಗ (ವರ್ಗ-2ಎ / 2ಬಿ /3ಎ /3ಬಿ): ಗರಿಷ್ಠ ವಯಸ್ಸಿನ ಮಿತಿ 38 ವರ್ಷಗಳು
ಡಿ) ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಒಬಿಸಿಗೆ (ವರ್ಗ-1): ಗರಿಷ್ಠ ವಯಸ್ಸಿನ ಮಿತಿ 40 ವರ್ಷಗಳು
ಇ) ವಿಧವೆಗಾಗಿ-ಗರಿಷ್ಠಕ್ಕಿಂತ 10 ವರ್ಷ ವಯೋಮಾನದ ಸಡಿಲಿಕೆ ಇರುತ್ತದೆ.

• ಪೂರಕ ದಾಖಲಾತಿಗಳು:
1) ಮೃತ ನೌಕರರ ಮೂಲ ಮರಣ ಪ್ರಮಾಣ ಪತ್ರದ ದೃಢೀಕೃತ ಪ್ರತಿ.
2) ಮೃತ ನೌಕರನ ಇಲಾಖೆಯ ಗುರುತಿನ ಚೀಟಿ
3) ಮೃತ ನೌಕರನ ಕುಟುಂಬದ ರೇಷನ್ ಕಾರ್ಡ್
4) ಮೃತ ನೌಕರರ ಕುಟುಂಬ ಸದಸ್ಯರ ಸಕ್ಷಮ ಪ್ರಾಧಿಕಾರದಿಂದ ಪಡೆದ ಸರ್ವೈವಲ್ ಪ್ರಮಾಣ ಪತ್ರ.
5) ಅರ್ಜಿದಾರರ ಪ್ಯಾನ್ ಕಾರ್ಡ್ ನ ಪ್ರತಿ
6) ಅರ್ಜಿದಾರರ ಆಧಾರ್ ಕಾರ್ಡ್ ನ ಪ್ರತಿ
7) ಅರ್ಜಿದಾರರ ಮತದಾರರ ಚೀಟಿಯ ಪ್ರತಿ
8) ಅರ್ಜಿದಾರರ ಶೈಕ್ಷಣಿಕ ಅರ್ಹತೆಯ ಪ್ರಮಾಣ ಪತ್ರಗಳು
9) ಅರ್ಜಿದಾರರ ವರ್ಗಾವಣೆ ಪ್ರಮಾಣ ಪತ್ರದ ಪ್ರತಿ
10) ಅರ್ಜಿದಾರರ ಜಾತಿ ಪ್ರಮಾಣ ಪತ್ರದ ಪ್ರತಿ
11) ಮೃತ ನೌಕರರ ಕುಟುಂಬದಲ್ಲಿ ಇತರ ಸದಸ್ಯರನ್ನು ಸೂಚಿರುವ ಯಾವುದೇ ಆಕ್ಷೇಪಣಾ ಪ್ರಮಾಣಪತ್ರ ಅರ್ಜಿದಾರನಿಗೆ ನೇಮಕ ನೀಡಲು ಒಪ್ಪಿಕೊಂಡಂತೆ ಅಫಿಡೆವಿಟ್ ನ್ನು ನೋಟರಿ ಮಾಡಿಸತಕ್ಕದ್ದು
12) ಮೃತ ಕುಟುಂಬದ ಸದಸ್ಯರಲ್ಲಿ ಯಾರೂ ಅನುಕಂಪದ ನೇಮಕಾತಿ ಪಡೆದುಕೊಂಡಿರದ ಬಗ್ಗೆ ಸಕ್ಷಮ ಪ್ರಾಧಿಕಾರದಿಂದ ಪಡೆದ ಪ್ರಮಾಣ ಪತ್ರ
13) ಅನುಕಂಪದ ನೇಮಕಾತಿಗಾಗಿ ಸಕ್ಷಮ ಪ್ರಾಧಿಕಾರದಿಂದ ಪಡೆದ ಕುಟುಂಬದ ವಾರ್ಷಿಕ ವರಮಾನ ಪ್ರಮಾಣ ಪತ್ರದ ಪ್ರತಿ
14) ವಿಧವಾ ಪ್ರಕರಣದಲ್ಲಿ ಮರುಮದುವೆಯಾಗದಿರುವ ಬಗ್ಗೆ ಸಕ್ಷಮ ಪ್ರಾಧಿಕಾರದ ಪ್ರಮಾಣ ಪತ್ರ.
15) ಅರ್ಜಿದಾರರ ಭಾವಚಿತ್ರ

• ಅರ್ಜಿ ಶುಲ್ಕ : Rs 0
• ಸೇವಾ ಶುಲ್ಕ (ಆನ್ ಲೈನ್ ಅರ್ಜಿ ಸಲ್ಲಿಕೆಗೆ ಸೇವಾ ಶುಲ್ಕವಿಲ್ಲ): Rs 40
• ವಿತರಣಾ ಸಮಯ (ದಿನಗಳು): 90
• ಅನ್ವಯಿಸುವ ವಿಧಾನ:
ಅರ್ಜಿಯನ್ನು ಸಲ್ಲಿಸುವ ಕೇಂದ್ರಗಳು: ಆನ್ ಲೈನ್, ಬಿ 1/ಕೇ1 ಕೇಂದ್ರಗಳು, ಸಿ ಎಸ್ ಸಿ ಕೇಂದ್ರಗಳು, ಎ ಜೆ ಎಸ್ ಕೆ ಕೇಂದ್ರಗಳು, ಬಾಪೂಜಿ ಸೇವಾ ಕೇಂದ್ರಗಳು.
ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿ/ವಿಶೇಷ/ಜಂಟಿ/ಉಪ ಕಾರ್ಯದರ್ಶಿ, ಸಿ.ಆ.ಸು. ಇಲಾಖೆ ಇವರಿಗೆ ಅರ್ಜಿ ಸಲ್ಲಿಸುವುದು.

ಇತ್ತೀಚಿನ ನವೀಕರಣ​ : 09-11-2020 08:20 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ - ಸಿಬ್ಬಂದಿ ಮತ್ತು ಆಡಳಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080