​ಪ್ರಕಾರ್ಯಗಳು ಮತ್ತು ಕರ್ತವ್ಯಗಳುಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸೇವಾ ನಿಯಮಗಳು ವಿಭಾಗದ  ಅಧೀನದ ಎಲ್ಲಾ ಶಾಖೆಗಳ ಪ್ರಕಾರ್ಯಗಳು ಮತ್ತು ಕರ್ತವ್ಯಗಳನ್ನು ಈ ಕೆಳಗೆ ತೋರಿಸಲಾಗಿದೆ:(ಅ) ಸೇವಾ ನಿಯಮಗಳು-ಎ ಶಾಖೆ:                ನೇರ ನೇಮಕಾತಿ/ಪದೋನ್ನತಿಗಳಲ್ಲಿ ಮೀಸಲಾತಿ, ಇಲಾಖಾ ಪರೀಕ್ಷೆಗಳು, ಜ್ಯೇಷ್ಠತೆ ಮತ್ತು ರಾಜ್ಯ ನಾಗರಿಕ ಸೇವೆಗಳಲ್ಲಿ ಅರ್ಹತಾ ಪರೀಕ್ಷಣೆ ಇವುಗಳಿಗೆ ಸಂಬಂಧಪಟ್ಟ ವಿಷಯಗಳು ಹಾಗೂ ಮೇಲಿನ ವಿಷಯಕ್ಕೆ ಸಂಬಂಧಪಟ್ಟಂತೆ ಬೇರೆ ಬೇರೆ ಇಲಾಖೆಗಳಿಂದ ಸ್ಪಷ್ಟೀಕರಣಗಳನ್ನು ಕೋರಿದ್ದಲ್ಲಿ ಅಭಿಪ್ರಾಯವನ್ನು ನೀಡುವುದು ಹಾಗೂ ಈ ಕೆಳಗಿನ ನಿಯಮಗಳಿಗೆ ಸಂಬಂಧಿಸಿದ ವಿಷಯಗಳು:ಕರ್ನಾಟಕ ಸಿವಿಲ್ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು, 1977.ಕರ್ನಾಟಕ ಸಿವಿಲ್ ಸೇವೆಗಳು (ಪರಿವೀಕ್ಷಣೆ) ನಿಯಮಗಳು 1977.ಕರ್ನಾಟಕ ಸಿವಿಲ್ ಸೇವೆಗಳು (ಗ್ರಾಮೀಣಾ ಕೃಪಾಂಕದ ಸೌಲಭ್ಯದೊಂದಿಗೆ ನೇಮಕಾತಿ ಹೊಂದಿದ ನೌಕರರ ವಿಲೀನಾತಿ) (ವಿಶೇಷ) ನಿಯಮಗಳು 2003 ಮತ್ತು ಸಂಬಂಧಿಸಿದ ಪ್ರಕರಣಗಳು.ಕರ್ನಾಟಕ ಗ್ರಾಮೀಣ ಅಭ್ಯರ್ಥಿಗಳಿಗಾಗಿ (ರಾಜ್ಯ ಸಿವಿಲ್ ಸೇವೆಗಳಲ್ಲಿ) ನೇಮಕಾತಿಗಳ ಅಥವಾ ಹುದ್ದೆಗಳ ಮೀಸಲಾತಿ ಅಧಿನಿಯಮ, 2000.ಕರ್ನಾಟಕ ಸರ್ಕಾರಿ ನೌಕರರ (ಜೇಷ್ಠತೆ) ನಿಯಮಗಳು, 1957.ರಾಜ್ಯ ಸಿವಿಲ್ ಸೇವೆಗಳು (ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡ ಅಭ್ಯರ್ಥಿಗಳಿಗೆ ಕೆಲವೊಂದು ಗುಂಪು-ಎ ಮತ್ತು ಗುಂಪು-ಬಿ ಹುದ್ದೆಗಳಿಗೆ ವಿಶೇಷ) ನೇಮಕಾತಿ ನಿಯಮಗಳು, 1985.ಕರ್ನಾಟಕ ರಾಜ್ಯ ನೌಕರರ (ವಯೋಮಿತಿ ನಿರ್ಧಾರ) ಅಧಿನಿಯಮ, 1974.ಕರ್ನಾಟಕ ಸಿವಿಲ್ ಸೇವೆಗಳು (ಕಾರ್ಯನಿರ್ವಹಣಾ ವರದಿಗಳು) ನಿಯಮಗಳು, 1994.ಕರ್ನಾಟಕರ ಸಿವಿಲ್ ಸೇವೆಗಳು (ಸೇವಾ ಮತ್ತು ಕನ್ನಡ ಭಾಷಾ ಪರೀಕ್ಷೆಗಳು) ನಿಯಮಗಳು, 1974.ಕರ್ನಾಟಕ ಲೋಕಸೇವಾ ಆಯೋಗ (ಸಮಾಲೋಚನೆ) ವಿನಿಯಮಗಳು, 2000(ಆ) ಸೇವಾ ನಿಯಮಗಳು-ಬಿ ಶಾಖೆ:                ಈ ಕೆಳಗಿನ ನಿಯಮಗಳಿಗೆ ಸಂಬಂಧಪಟ್ಟ ವಿಷಯಗಳು: ಸರ್ಕಾರಿ ನೌಕರರ ವರ್ಗಾವಣೆ ಕಾರ್ಯ ನೀತಿ.ಕರ್ನಾಟಕ ಸಿವಿಲ್ ಸೇವಾ (ಲಿಪಿಕ ಹುದ್ದೆಗಳ ನೇಮಕಾತಿ) ನಿಯಮಗಳು, 1978.ಕರ್ನಾಟಕ ನಾಗರಿಕ ಸೇವಾ (ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಆಯ್ಕೆ ಮೂಲಕ ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು, 2006. ಕರ್ನಾಟಕ ಸಿವಿಲ್ ಸೇವಾ (ಬೆರಳಚ್ಚುಗಾರರು ಮತ್ತು ಕಿರಿಯ ಸಹಾಯಕರುಗಳು, ದ್ವಿತೀಯ ದರ್ಜೆ ಸಹಾಯಕರುಗಳು) (ಉದ್ಯೋಗಿ ವೃಂದದ ಬದಲಾವಣೆ) ನಿಯಮಗಳು 1964.ಕರ್ನಾಟಕ ಸಿವಿಲ್ ಸೇವಾ (ಶೀಘ್ರಲಿಪಿಗಾರರ ಮತ್ತು ಬೆರಳಚ್ಚುಗಾರರ ನೇಮಕಾತಿ) ನಿಯಮಗಳು 1983.ಕರ್ನಾಟಕ ಸಿವಿಲ್ ಸೇವಾ (ಕೋಮು ಗಲಭೆಗಳಲ್ಲಿ ಮತ್ತು ಪರಿಶಿಷ್ಟ ಜಾತಿ ಪಂಗಡಗಳ ಮೇಲಿನ ದೌರ್ಜನ್ಯದಲ್ಲಿ ಮೃತರಾದವರ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ  ನೇಮಕಾತಿ ನೀಡುವ  ನಿಯಮಗಳು) 1993.ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು 1996. (ಇ) ಸೇವಾ ನಿಯಮಗಳು-ಸಿ ಶಾಖೆ:                ಈ ಕೆಳಕಾಣಿಸಿದ ನಿಯಮಗಳಿಗೆ ಸಂಬಂಧಪಟ್ಟ ವಿಷಯಗಳು:1)ಕರ್ನಾಟಕ ನಾಗರಿಕ ಸೇವಾ (ಮುಷ್ಕರಗಳ ನಿರೋಧ) ಅಧಿನಿಯಮ,1966ಕರ್ನಾಟಕ ಸಿವಿಲ್ ಸೇವಾ (ಸಂಘಗಳಿಗೆ ಮಾನ್ಯತೆ ನಿಯಮಗಳು) 2013.ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ)ನಿಯಮಗಳು, 1957ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳು, 1966ಕರ್ನಾಟಕ ಸರ್ಕಾರದ (ವ್ಯವಹಾರ ಹಂಚಿಕೆ) ನಿಯಮಗಳು, 1977ಕರ್ನಾಟಕ (ವ್ಯವಹಾರ ನಿರ್ವಹಣೆ) ನಿಯಮಗಳು, 1977ಕರ್ನಾಟಕ ಇಲಾಖಾ ವಿಚಾರಣೆಗಳು (ಸಾಕ್ಷಿಗಳ ಹಾಜರಾತಿ ಮತ್ತು ದಸ್ತಾವೇಜುಗಳ ಹಾಜರುಪಡಿಸುವಿಕೆ) ನಿಯಮಗಳು, 1981ಕರ್ನಾಟಕ ನಾಗರಿಕ ಸೇವಾ (ಸ್ಥಳೀಯ ಅಭ್ಯರ್ಥಿಗಳ ನೇಮಕಾತಿ) ನಿಯಮಗಳು, 1966ದಿನಗೂಲಿ ನೌಕರರ, ವಿಶೇಷ ಸ್ವಇಚ್ಛಾ ನಿವೃತ್ತಿ ಯೋಜನೆ ಮತ್ತು ಕಡ್ಡಾಯ ನಿವೃತ್ತಿಗಳಿಗೆ ಸಂಬಂಧಪಟ್ಟ ವಿಷಯಗಳು ಹಾಗೂ ಮೇಲ್ಕಂಡ ವಿಷಯಗಳಿಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ ಕೋರಿದ್ದಲ್ಲಿ ಅಭಿಪ್ರಾಯ ನೀಡುವುದು.(ಈ) ಸೇವಾ ನಿಯಮಗಳು- ಡಿ ಶಾಖೆ:ಕರ್ನಾಟಕ ನಾಗರಿಕ ಸೇವೆಗಳು ಅಧಿನಿಯಮ 1978 ರಂತೆ, ಆಡಳಿತ ಸಚಿವಾಲಯದ ಇಲಾಖೆಗಳ ಅಧೀನದಲ್ಲ್ಲಿ ಬರುವ ಇಲಾಖೆಗಳಿಗೆ ಸಂಬಂಧಪಟ್ಟಂತೆ,  ವೃಂದ ಮತ್ತು ನೇಮಕಾತಿ ನಿಯಮಗಳ ರಚನೆ/ತಿದ್ದುಪಡಿ ವಿಷಯಕ್ಕೆ ಸಂಬಂಧಪಟ್ಟಂತೆ ಅಭಿಪ್ರಾಯ/ಸಹಮತಿ ನೀಡುವ ವಿಷಯಗಳು.(ಉ) ಸೇವಾ ನಿಯಮಗಳು-ಎಫ್ ಶಾಖೆ:                ಅ) ಈ ಕೆಳಗಿನ ನಿಯಮಗಳಿಗೆ ಸಂಬಂಧಪಟ್ಟ ವಿಷಯಗಳು:ಕರ್ನಾಟಕ ರಾಜ್ಯ ನಾಗರಿಕ ಸೇವೆಗಳು (ವೇತನ, ಪದೋನ್ನತಿ ಮತ್ತುಪಿಂಚಣಿ ಕ್ರಮ ಬದ್ಧತೆ) ಅಧಿನಿಯಮ, 1973 ಮತ್ತು ನಿಯಮಗಳು, 1978ಕರ್ನಾಟಕ ಲೋಕಾಯುಕ್ತ ಅಧಿನಿಯಮ, 1985ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಅಧಿನಿಯಮ, 1985 ಮತ್ತುನಿಯಮಗಳು, 1983ಕರ್ನಾಟಕ ಸರ್ಕಾರಿ ನೌಕರರುಗಳ (ವೈದ್ಯೋಪಚಾರ) ನಿಯಮಗಳು, 1963      ಆ) ಏಕೀಕರಣ ಮತ್ತು ಅಂತರ್ ರಾಜ್ಯ ಪಟ್ಟಿಗೆ ಸಂಬಂಧಿಸಿದ ವಿಷಯಗಳು(ಊ) ಕರ್ನಾಟಕ ಸರ್ಕಾರ ಆರೋಗ್ಯ ಕಲ್ಯಾಣ ಟ್ರಸ್ಟ್ ಶಾಖೆ:ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆ ಒದಗಿಸಲು "ಜ್ಯೋತಿ ಸಂಜೀವಿನಿ" ಯೋಜನೆ ಜಾರಿಗೊಳಿಸುವ ಕುರಿತಾದÀ ವಿಷಯಗಳು.

                                                                                                    ಮತ್ತಷ್ಟು...