ನಗದು-1 ಶಾಖೆಯಲ್ಲಿ ಸಚಿವಾಲಯದ ಎಲ್ಲಾ ಅಧಿಕಾರಿ/ನೌಕರರ ವೇತನದ ಬಿಲ್ಲು, ಪ್ರಯಾಣ ಭತ್ಯೆಯ ಬಿಲ್ಲು ಹಾಗೂ ಸಚಿವಾಲಯದ ಎಲ್ಲಾ ಇಲಾಖೆ  ಡಿ.ಸಿ. ಬಿಲ್ಲುಗಳು ಹಾಗೂ ಮುಖ್ಯಮಂತ್ರಿ ಸಚಿವಾಲಯ ಹಾಗೂ ಎಲ್ಲಾ ಸಚಿವರುಗಳ ಪ್ರಯಾಣ ಭತ್ಯೆ, ವಿದ್ಯುಚ್ಛಕ್ತಿ ಹಾಗೂ ನೀರಿನ ಬಿಲ್ಲು, ಮನೆಬಾಡಿಗೆ, ಇತರೆ ಭತ್ಯೆಗಳ ಡಿ.ಸಿ ಬಿಲ್ಲುಗಳನ್ನು ಖಜಾನೆಗೆ ಸಲ್ಲಿಸುವುದು.   ಸರ್ಕಾರದ ಉಪ ಕಾರ್ಯದರ್ಶಿ ಮತ್ತು ಮೇಲ್ಪಟ್ಟ ಅಧಿಕಾರಿಗಳು ಹಾಗೂ ನ್ಯಾಯಾಂಗ ಇಲಾಖೆಗೆ ಸೇರಿದ ಅಧಿಕಾರಿಗಳ ವಿದ್ಯುಚ್ಫಕ್ತಿ ಹಾಗೂ ನೀರಿನ ವೆಚ್ಚದ ಮರುಪಾವತಿ, ಗೃಹ ಪರಿಚಾರಿಕೆ ಭತ್ಯೆ ಮತ್ತು ಉಪಹಾರ ಭತ್ಯೆ ಬಿಲ್ಲುಗಳನ್ನು ಪರಿಷ್ಕರಿಸಿ ಖಜಾನೆಗೆ ಸಲ್ಲಿಸುವುದು. ವಿಧಾನಮಂಡಲ ಅಧಿವೇಶನ ಸಮಯದಲ್ಲಿ ಹೆಚ್ಚುವರಿ  ಕಾರ್ಯನಿರ್ವಹಣೆಗಾಗಿ  ಸಂಭಾವನೆ  ಹಾಗೂ ಆರ್ಥಿಕ ಇಲಾಖೆಯಲ್ಲಿ ಆಯವ್ಯಯ ತಯಾರಿಕೆ ಸಂಬಂಧಿಸಿದಂತೆ ಸಿಬ್ಬಂದಿಗೆ ಗೌರವ ಧನ ಮಂಜೂರಾತಿ.  ಖಜಾನೆಯಿಂದ  ಬರುವ  ಚೆಕ್ಕುಗಳನ್ನು  ನಿಗದಿತ  ಪುಸ್ತಕಗಳಲ್ಲಿ ನಮೂದಿಸಿ,   ಸಂಬಂಧಪಟ್ಟವರಿಗೆ ವಿತರಿಸುವುದು.   ವಿವಿಧ ಲೆಕ್ಕ ಶೀರ್ಷಿಕೆಗಳಲ್ಲಿ ಸರ್ಕಾರದ ಲೆಕ್ಕಕ್ಕೆ ಬರುವ ಚೆಕ್ಕು ಮತ್ತು ನಗದನ್ನು ಜಮಾ ಮಾಡುವುದು.  ಆರ್.ಟಿ.ಐ. / ನ್ಯಾಯಾಂಗ / ಇತರೆ ಶುಲ್ಕಗಳ ಹಾಗೂ ಸಾಮಾನ್ಯ ಲೆಕ್ಕ ಶೀರ್ಷಿಕೆಗಳಡಿಯಲ್ಲಿ ಬರುವ ಮೊಬಲಗನ್ನು ಸರ್ಕಾರದ ಲೆಕ್ಕಕ್ಕೆ ಜಮಾ ಮಾಡುವುದು.   ರಿಸರ್ವ್ ಬ್ಯಾಂಕ್ ನಲ್ಲಿ ಸರ್ಕಾರದ ಚೆಕ್ಕುಗಳನ್ನು ನಗದೀಕರಿಸಿ ನಗದನ್ನು ತರುವುದು.  ವೇತನೇತರ ಬಿಲ್ಲುಗಳಲ್ಲಿ ಆದಾಯತೆರಿಗೆ (ಟಿಡಿಎಸ್) ಲೆಕ್ಕ ನಮೂದಿಸಿ, ಆದಾಯ ಇಲಾಖೆಗೆ ತೈಮಾಸಿಕ ತ:ಖ್ತೆಯ ವರದಿ ಸಲ್ಲಿಸಿಮೊಬಲಗನ್ನು ಜಮಾ ಮಾಡುವುದು.   ಹೆಚ್.ಬಿ.ಎ., ಹೆಚ್.ಡಿ.ಎಫ್.ಸಿ., ಎಂ.ಸಿ.ಎ., ಸಿ.ಪಿ.ಎ. ಮುಂಗಡಗಳಿಗೆ ಸಂಬಂಧಿಸಿದ ವಹಿಗಳು / ಲಕೋಟೆಗಳ ನಿರ್ವಹಣೆ.