ಪೀಠಿಕೆ
ಸಿಬ್ಬಂದಿ -1
ಕರ್ನಾಟಕ ಸರ್ಕಾರ ಸಚಿವಾಲಯದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸಿಬ್ಬಂದಿ ಶಾಖೆಯಲ್ಲಿ ಸಚಿವಾಲಯದ ಶಾಖಾಧಿಕಾರಿಗಳ (ಗ್ರೂಪ್-ಬಿ) ಸೇವಾ ವಿಷಯಗಳನ್ನು ನಿರ್ವಹಿಸಲಾಗುತ್ತದೆ.
1 |
ಶಾಖಾಧಿಕಾರಿ ಹುದ್ದೆಗಳ ನೇಮಕಾತಿ, ಕನ್ನಡ ಹಿರಿಯ ಭಾಷಾಂತರಕಾರ ಹುದ್ದೆ ನೇಮಕಾತಿ |
2 |
ಹಿರಿಯ ಸಹಾಯಕ ವೃಂದದಿಂದ ಶಾಖಾಧಿಕಾರಿ ಹುದ್ದೆಗಳಿಗೆ ಬಡ್ತಿ ಹಾಗೂ ಪ್ರಾರೂಪಣಾ ಸಹಾಯಕ ವೃಂದದಿಂದ ಪ್ರಾರೂಪಣಾ ಶಾಖಾಧಿಕಾರಿ ಹುದ್ದೆಗಳಿಗೆ ಬಡ್ತಿ. ಪೂರ್ವಾನ್ವಯವಾಗಿ ಬಡ್ತಿ ಮತ್ತು ಬಡ್ತಿ ಹೊಂದಿದ ಹುದ್ದೆಯಲ್ಲಿ ವೇತನ ನಿಗದಿ |
3 |
ವರ್ಗಾವಣೆ, ನಿಯೋಜನೆ, ಬಿಡುಗಡೆ, ಹುದ್ದೆಗಳ ಸೃಜನೆ & ಮುಂದುವರಿಸುವುದು ನಿಯೋಜನೆ ಮೇಲೆ ಕಾರ್ಯನಿರ್ವಹಿಸುವರ ಅಂತಿಮ ವೇತನ ಪ್ರಮಾಣ ಮತ್ತು ಸೇವಾಪುಸ್ತಕ ತರಿಸುವುದು/ ಕಳುಹಿಸುವುದು. |
4 |
ಆರ್ಥಿಕ ಇಲಾಖೆಯ ಅಧೀನಕ್ಕೊಳಪಡುವ ಕ್ಷೇತ್ರ ಇಲಾಖೆಗಳ ನೇಮಕಾತಿ ಮತ್ತು ಬಡ್ತಿ ವಿಷಯದ ಪ್ರಸ್ತಾವನೆಗಳ ಪರಿಶೀಲನೆ |
5 |
ಶಾಖಾಧಿಕಾರಿಗಳಿಗೆ ಸಂಬಂಧಿಸಿದ ನ್ಯಾಯಾಂಗ ಮೊಕದ್ದಮೆಗಳು, ವಿಧಾನ ಸಭೆ/ಪರಿಷತ್ ಪ್ರಶ್ನೆಗಳು ವಿವಿಧ ಆಯೋಗ/ಸಮಿತಿ ಕೋರುವ ಮಾಹಿತಿಗಳ ನೀಡುವುದು |
6 |
ಬಹುಪ್ರತಿ ಶಾಖೆಯ ನಿರ್ವಹಣೆ |
7 |
ವಾರ್ಷಿಕ ವೇತನ ಬಡ್ತಿ, ಸ್ಥಗಿತ ವೇತನ ಬಡ್ತಿ, ವೈಯಕ್ತಿಕ ವೇತನ, ರಜೆ ಮಂಜೂರಾತಿ, ಗಳಿಕೆ ರಜೆ ನಗಧೀಕರಣ, ಹಬ್ಬದ ಮುಂಗಡ, ವೈದ್ಯಕೀಯ ವೆಚ್ಚ ಮರುಪಾವತಿ, ಸ್ವಗ್ರಾಮ ಪ್ರಯಾಣ ರಿಯಾಯಿತಿ ಮತ್ತು ರಜಾ ಪ್ರಯಾಣ ರಿಯಾಯಿತಿ ಮಂಜೂರಾತಿ ವಿಷಯಗಳು |
8 |
ಕಾಲಬದ್ಧ ವೇತನ ಬಡ್ತಿ, ವೇತನ ಎತ್ತರಿಕೆ, ವಿವಿಧ ಉದ್ದೇಶಕ್ಕೆ ಅನುಮತಿ ಪತ್ರ/ನಿರಾಕ್ಷೇಣೆ ಪತ್ರ, ಮನೆ ಕಟ್ಟುವ/ಖರೀದಿ/ರಿಪೇರಿ ಮುಂಗಡ, ವಾಹನ ಖರೀದಿ ಮುಂಗಡ, ಸಾಲ ಮುಕ್ತ ಪತ್ರಗಳ ನೀಡುವಿಕೆ, ಸಾಮಾನ್ಯ ಭವಿಷ್ಯ ನಿಧಿ, ನಿವೃತ್ತಿ ವೇತನ, ಡಿಸಿಆರ್ ಜಿ ಮತ್ತು ಸೇವಾಂತ್ಯದ ಇನ್ನಿತರ ಸವಲತ್ತುಗಳ ಇತ್ಯರ್ಥ |
9 |
ಸೇವಾ ಪುಸ್ತಕಗಳ ನಿರ್ವಹಣೆ ಮತ್ತು ಸೇವಾ ವಿಷಯ ದಾಖಲೆ, ವಿಮಾ ಪ್ರಸ್ತಾವನೆ ಸೇವಾ ದೃಢೀಕರಣ ಪತ್ರ, ಹೆಚ್.ಆರ್.ಎಂ.ಎಸ್. ನಮೂದುಗಳು |
10 |
ಮಾಹಿತಿಯ ಹಕ್ಕು ಅಧಿನಿಯಮ 2005ರಡಿ ಕೋರಿರುವ ಮಾಹಿತಿ ನೀಡುವ ಬಗ್ಗೆ ಇತ್ಯಾದಿ |
11 |
ಶಾಖೆಯ ಎಲ್ಲಾ ಚಲನವಲನ ಪುಸ್ತಕದಲ್ಲಿ ದಾಖಲೆ, ಕಾಲಕಾಲಕ್ಕೆ ಸಲ್ಲಿಸಬೇಕಾದ ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ವರದಿಗಳ ಸಲ್ಲಿಸುವಿಕೆ ಇತ್ಯಾದಿ |
ಸಿಬ್ಬಂದಿ -2
ಕರ್ನಾಟಕ ಸರ್ಕಾರ ಸಚಿವಾಲಯದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಭಾಗವಾಗಿ “ಸಿಬ್ಬಂದಿ-2” ಶಾಖೆಯನ್ನು ರಚಿಸಲಾಗಿದೆ. ಈ ಶಾಖೆಯು ಬಹುಮಹಡಿ ಕಟ್ಟಡದ 2ನೇ ದ್ವಾರ ನಾಲ್ಕನೇ ಮಹಡಿಯಲ್ಲಿ ಸ್ಥಾಪಿತವಾಗಿದ್ದು, ಇಲ್ಲಿ ಸಚಿವಾಲಯದ ವೃಂದ-‘ಬಿ’ ಅಧಿಕಾರಿಗಳ (ಶಾಖಾಧಿಕಾರಿ/ ಪತ್ರಾಂಕಿತ ಆಪ್ತ ಸಹಾಯಕರ/ ಉಪಗ್ರಂಥಾಧಿಕಾರಿ) ಮತ್ತು ವೃಂದ ಮತ್ತು ನೇಮಕಾತಿ ನಿಯಮದಲ್ಲಿ ತಿಳಿಸಿರುವಂತಹ ‘ಸಿ’ ವೃಂದದ ನೌಕರರ ಆಸ್ತಿ ಮತ್ತು ಹೊಣೆಗಾರಿಕೆ ತಃಖ್ತೆಗಳ ಹಾಗೂ ವಾರ್ಷಿಕ ಕಾರ್ಯನಿರ್ವಹಣಾ ವರದಿಗಳ ಸಂಗ್ರಹ ಮತ್ತು ಪರಿಶೀಲನೆ ಕಾರ್ಯ ನಿರ್ವಹಿಸಲಾಗುತ್ತದೆ.
ಅಲ್ಲದೇ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಆಡಳಿತ/ಸಿಬ್ಬಂದಿ/ಲೆಕ್ಕಪತ್ರ ವಿಭಾಗದ ಸಮನ್ವಯ ಕಾರ್ಯ ಹಾಗೂ ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಸಮನ್ವಯ ಕಾರ್ಯವನ್ನು ಸಹ ಕೈಗೊಳ್ಳಲಾಗುತ್ತದೆ. ಶಾಖೆಯಲ್ಲಿನ ಕಡತಗಳು ಶಾಶ್ವತ ಕಡತಗಳಾಗಿದ್ದು, ಸಿಬ್ಬಂದಿಗಳ ಕಾರ್ಯ ಪ್ರಶಂಸಾರ್ಹ.